Bunts- Association

About Us

Necessity is the mother of invention. Probably this statement fits well with the birth of the Thane Bunts Association. For several years the Bunts community living in and around Thane were looking for a rallying point to unite themselves and to know each other, develop a friendship and be part of one another’s hardship and joyful events.


To fulfil this long-term needs, Bunts of Thane were looking for a competent and able leadership with a sense of selfless service, social responsibility for guiding the new generations for their aspirations.

With this in mind seven visionary leaders came together to take the responsibility of leading them On Saturday, January 3, 2004, the long-cherished dream of Thane’s Bunts community came to fruition with the inception of the Thane Bunts Association (R). This milestone was made possible by the following seven founding members.

1.Shri D G Bolar-Founder President
2.Late Prof Seetaram Shetty
3. Shri Bhaskar M Shetty
4.Shri Keshav M Alva
5.Shri Ravindra M Shetty
6.Shri N Shekar Shetty
7.Late Shri Sanjeeva K Shetty

The Thane Bunts Association’s inauguration took place at Ram Ganesh Gadkari Rangayatan, Thane on April 12, 2004, and was graciously inaugurated by renowned famous Kannada-Tulu Poet & Writer, Shri. Kayyar Kinhanna Rai, from Peradala. Prominent businessman Shri Sadanand Shetty (Chairman,Fouress Engineering India Ltd.) the chief guest, envisioned a bright future for the Thane Bunts Association.

Other distinguished guests who attended the ceremony included:
– Shri. B. Vivek Shetty, (President, Buntara Sangha Mumbai)
– Shri. Jayakrishna Shetty, (Founder, Jayakrishna Parisara Premi Samiti)
– Shri. Subhash B. Shetty, (President, Jayakrishna Parisara Premi Samiti)
– Shri. Aikala Harish Shetty, (President, Sai Sandhya Arts)
– Shri. Umesh Shetty, (President, Bunts Forum Mira Road)*

The Thane Bunts Association (R) aims to achieve the following objectives:

1.To develop mutual relation and harmony among Bunts relatives of Thane and surrounding Thane .
2. To share each other’s hardships and joys regardless of whether they are poor or rich.
3. Giving help and co-operation to Bunts relatives in education, employment and marriage.
4. To save and nurture the identity of the Bunts community and to strive for the all-round development of the Bunts community
5. To preserve the cultural heritage of Tulu land (Tulunadu) and the richness of Tulu language.
6. To foster cordial relations and harmony with other community, different language and people of other castes.
7. Along with saving the identity of Bunts, striving for national spirituality.
8. To start Sneha Saurabha, the mouthpiece of Thane Bunts Association, to publish the report of the activities of the association and the details of the achievements of Thane Bunts Association in various fields and to provide an opportunity to new writers.

ನಮ್ಮ ಬಗ್ಯೆ

ಅವಶ್ಯಕತೆಯೇ ಆವಿಷ್ಕಾರದ ಜನನಿ ಎನ್ನೋ ಮಾತೊಂದುಂಟು.
ಈ ಮಾತು ಥಾಣೆ ಬಂಟ್ಸ್ ಅಸೋಸಿಯೇಷನ್ ನ ಸ್ಥಾಪನೆಯ ಸಂದರ್ಭಕ್ಕೂ ಚೆನ್ನಾಗಿ ಹೊಂದಾಣಿಕೆಯಾಗುತ್ತೆ. ಹಲವಾರು ವರ್ಷಗಳಿಂದ ಥಾಣೆ ಪರಿಸರದ ಬಂಟ ಬಾಂಧವರು ಒಂದುಗೂಡಬೇಕು, ಪರಸ್ಪರ ಪರಿಚಯ, ಸ್ನೇಹ ಬೆಳೆಸಿಕೊಂಡು ಒಬ್ಬರು ಮತ್ತೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಗಳಾಗಬೇಕು ಎನ್ನೋ ಸದಿಚ್ಚೆ ಪ್ರತಿಯೊಬ್ಬ ಬಂಟ ಬಾಂಧವರ ಮನದಲ್ಲೂ ಇತ್ತು. ಆದರೆ ಅದಕ್ಕೊಂದು ಸ್ಪಷ್ಟ ರೂಪ, ಸಮರ್ಥ ನಾಯಕತ್ವ, ಸಾಂಘಿಕ ಹೊಣೆಗಾರಿಕೆಯನ್ನು ಹೊರುವ ನಿಸ್ವಾರ್ಥ ಸೇವಾ ಭಾವದ ವ್ಯಕ್ತಿಯ ಅಗತ್ಯವಿತ್ತು.
ಜನವರಿ 3, 2004 ರ ಶನಿವಾರ ದಂದು ಥಾಣೆಯ ಬಂಟರ ಬಹು ದಿನದ ಕನಸು ನನಸಾಗುವ ಯೋಗ ಬಂದೊದಗಿತು..
1.ಶ್ರೀ ಡಿ ಜಿ ಬೋಳಾರ್ .
2.ದಿ.ಪ್ರಾ ಸೀತಾರಾಮ ಆರ್ ಶೆಟ್ಟಿ,.
3.ಶ್ರೀ ಕೇಶವ ಎಮ್ ಆಳ್ವ .
4.ದಿ.ಶ್ರೀ ಸಂಜೀವ ಶೆಟ್ಟಿ.
5.ಶ್ರೀ ಭಾಸ್ಕರ್ ಎಮ್ ಶೆಟ್ಟಿ .
6.ಶ್ರೀ ರವೀಂದ್ರ ಎಮ್ ಶೆಟ್ಟಿ
7.ಶ್ರೀ ಎನ್‌ .ಶೇಖರ ಶೆಟ್ಟಿ.
ಈ ಏಳು ಮಂದಿ ಸ್ಥಾಪಕ ಸದಸ್ಯರು ಹಾಕಿ ಕೊಟ್ಟ ರೂಪು ರೇಖೇಯಂತೆ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಉದಯವಾಯಿತು.
12/04/2004 ರಂದು ಅಸೋಸಿಯೇಷನ್ ಉದ್ಟಾಟನೆಯ ಸಮಾರಂಭವನ್ನು ದೂರದ ಪೆರಡಾಲದಿಂದ ಕವಿ ಶ್ರೇಷ್ಠರೂ ಮಹಾನ್ ಲೇಖಕರೂ ವಿಶ್ವ ಮಾನವರೂ ಆಗಿದ್ದ ಶ್ರೀ ಕಯ್ಯಾರ ಕಿಂಜ್ಞಣ್ಣ ರೈ ಯವರ ಶುಭ ಹಸ್ತದಿಂದಲೂ ಮತ್ತು ಅಂದಿನ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಉದ್ಯಮಿ ಸದಾನಂದ ಶೆಟ್ಟಿ ಹರಸಿದ್ದು,
ಥಾಣೆ ಬಂಟ್ಸ್ ನ ಉಜ್ವಲ ಭವಿಷ್ಯ ಕ್ಕೆ ನಾಂದಿ ಹಾಡಿತು.ಅವರಲ್ಲದೆ
1.ಬಂಟರ ಸಂಘ ಮುಂಬೈ ಇದರ ಅಧ್ಯಕ್ಷ ಶ್ರೀ ಬಿ ವಿವೇಕ್ ಶೆಟ್ಟಿಯವರು,

2.ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಶ್ರೀ ಜಯಕೃಷ್ಣ ಶೆಟ್ಟಿಯವರು,

3.ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಸುಭಾಸ್ ಬಿ ಶೆಟ್ಟಿ ಯವರು

4.ಸಾಯಿ ಸಂಧ್ಯಾ ಆರ್ಟ್ಸ್ ನ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಯವರು,

5. ಬಂಟ್ಸ್ ಫೋರಮ್ ಮೀರಾ ರೋಡ್ ಇದರ ಅಧ್ಯಕ್ಷ ಶ್ರೀ ಉಮೇಶ್ ಶೆಟ್ಟಿ

ಮೊದಲಾದವರು ಈ ಸಮಾರಂಭಕ್ಕೆ ಆಗಮಿಸಿ ಸಮಾರಂಭದ ಅಂದವನ್ನು ದ್ವಿಗುಣಗೊಳಿಸಿದರು.
ಥಾಣೆ ಬಂಟ್ಸ್ ಅಸೋಸಿಯೇಷನ್ ಈ ಕೆಳಗಿನ ಧ್ಯೆಯ ಧೋರಣೆಗಳನ್ನು ಮುಂದಿರಿಸಿಕೊಂಡು ಕಾರ್ಯ ರೂಪಕ್ಕಿಳಿಸಲು ನಿರ್ಧರಿಸಿತು.
1.ಥಾಣೆ ಹಾಗೂ ಥಾಣೆ ಪರಿಸರದ ಬಂಟ ಬಾಂಧವರಲ್ಲಿ ಪರಸ್ಪರ ಬಾಂಧವ್ಯ ಹಾಗೂ ಸಾಮರಸ್ಯವನ್ನು ಬೆಳೆಸುವುದು.
2.ಬಡವ ಬಲ್ಲಿದ ಎಂಬ ಭೇದ ವಿಲ್ಲದೆ ಬಂಟ ಬಾಂಧವರ ಕಷ್ಟ ಸುಖಗಳಲ್ಲಿ ಪರಸ್ಪರ ಭಾಗಿಯಾಗುವುದು.
3 .ಶಿಕ್ಷಣ ಉದ್ಯೋಗ ಹಾಗೂ ವಿವಾಹಾದಿಗಳಲ್ಲಿ ಬಂಟ ಬಾಂಧವರಿಗೆ ಸಹಾಯ, ಸಹಕಾರ ನೀಡುವುದು.
4.ಬಂಟರ ಅಸ್ಮಿತೆಯನ್ನು ಉಳಿಸುವುದು,ಬೆಳೆಸುವುದು ಬಂಟರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದು.
5.ತುಳು ನಾಡ ಸಂಸ್ಕೃತಿ ಪರಂಪರೆ ಹಾಗೂ ತುಳುಭಾಷೆ ಯ ಶ್ರೀಮಂತಿಕೆಯನ್ನು ಉಳಿಸುವುದು.
6.ಅನ್ಯ ಭಾಷಿಯರ ಅನ್ಯ ಜಾತಿಯರ ಜೊತೆಗೆ ಮಧುರ ಬಾಂಧವ್ಯವನ್ನು ಸಾಮರಸ್ಯ ವನ್ನು ಬೆಳೆಸುವುದು.
7.ಬಂಟರ ಅನನ್ಯತೆ (identity)ಯನ್ನು ಉಳಿಸುವುದರ ಜತೆಗೆ ರಾಷ್ಟ್ರೀಯ ಭಾವೈಕ್ಯತೆಗೆ ಶ್ರಮಿಸುವುದು.
8 .ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮುಖವಾಣಿ ಸ್ನೇಹ ಸೌರಭವನ್ನು ಆರಂಭಿಸಿ ಅಸೋಸಿಯೇಷನ್ ನ ಚಟುವಟಿಕೆಗಳ ವರದಿ ಹಾಗೂ ವಿವಿಧ ರಂಗಗಳಲ್ಲಿ ಥಾಣೆ ಬಂಟರ ಸಾಧನೆಯ ವಿವರ ಗಳನ್ನು ಪ್ರಕಟಿಸುವುದರ ಜತೆಗೆ ಹೊಸ ಬರಹಗಾರರಿಗೆ ಅವಕಾಶವನ್ನು ಕಲ್ಪಿಸಿಕೊಡುವುದು.

ಜೈ ಹಿಂದ್‌. ಜೈ ಬಂಟ್ಸ್.

Scroll to Top